ನಿಧಿ ಸುಬ್ಬಯ್ಯ (ಜನನ: ೧೬-೦೨-೧೯೮೭) ಕನ್ನಡ ಚಲನಚಿತ್ರಗಳ ನಾಯಕಿ ನಟಿ ಮತ್ತು ರೂಪದರ್ಶಿ. ಮೂಲತಃ ಕೊಡಗಿನವರಾಗಿದ್ದು, ಮೈಸೂರಿನಲ್ಲಿ ವಿದ್ಯಾಭ್ಯಾಸ ಪಡೆದರು. ಬಿ ಇ ಮಾಡುತ್ತಿದ್ದಾಗ ಮಾಡೆಲ್ಲಿಂಗಿನಲ್ಲಿ ಆಸಕ್ತಿ ಬೆಳೆಸಿಕೊಂಡು ಬಳಿಕ ಚಿತ್ರರಂಗವನ್ನು ಪ್ರವೇಶಿಸಿದರು. == ಜನನ ಮತ್ತು ಬಾಲ್ಯ == ಸುಬ್ಬಯ್ಯ ದಂಪತಿಗಳ ಏಕೈಕ ಪುತ್ರಿ ನಿಧಿ ಜನಿಸಿದ್ದು ೧೬ನೇ ಫೆಬ್ರವರಿ ೧೯೮೭ರಲ್ಲಿ ಕೊಡಗಿನಲ್ಲಿ. ಮೈಸೂರಿನ ಸೈಂಟ್ ಜೋಸೆಫ್'ಸ್ ಕೇಂದ್ರೀಯ ವಿದ್ಯಾಲಯದಲ್ಲಿ ಪ್ರೌಢಶಾಲೆಯ ಬಳಿಕ ಶ್ರೀ ಜಯಚಾಮರಾಜೇಂದ್ರ ಕಾಲೆಜ್ ಆಫ್ ಇಂಜಿನಿಯರಿಂಗ್ (ಜೆ ಸಿ ಇ)ನಲ್ಲಿ ಸಿವಿಲ್ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಲೇ ಮಾಡೆಲ್ಲಿಂಗ್ನಲ್ಲಿ ಅಭಿರುಚಿಯುಂಟಾಗಿ, ಫೇರ್ ಎಂಡ್ ಲವ್ಲಿ, ಮೊದಲಾದ ಹಲವಾರು ಟಿ ವಿ ಜಾಹೀರಾತುಗಳಲ್ಲಿ ಅಭಿನಯಿಸಿದರು. == ಚಲನಚಿತ್ರಗಳು ==